ಬೆಂಗಳೂರು- ನಗರ ಬಲಿಜ ಸಂಘ( ರಿ)
ಶಿವನಗರ ರಾಜಾಜಿನಗರ ಬೆಂಗಳೂರು
2003ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಗಳನ್ನು ತಪ್ಪದೇ ಮಾಡುತ್ತಾ ಬಂದಿರುತ್ತದೆ. ಇವರು ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಸಂಘದ ವತಿಯಿಂದ ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಮಾಡಲಾಯಿತು.
ಸ್ವಾತಂತ್ರ್ಯ ಹಬ್ಬದ ಧ್ವಜಾರೋಹಣ ಮಾಡಿದ ನಂತರ ಕುಲದೈವ ವಾದ ಕೈವಾರ ತಾತಯ್ಯನವರ ಪೂಜಾ ಕಂಕರ್ಯದ ನಂತರ ಪ್ರತಿವರ್ಷದಂತೆ ಈ ವರ್ಷವೂ ಅತ್ಯುತ್ತಮ ಅಂಕ ಗಳಿಸಿ ಉತ್ತೀರ್ಣರಾದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಹಾಗೂ ಧನಸಹಾಯವನ್ನು ನೀಡಲಾಯಿತು . ಈ ಎಲ್ಲಾ ಕಾರ್ಯಕ್ರಮಗಳನ್ನು ಸಂಘದ ಅಧ್ಯಕ್ಷರಾದ ಬಾಲಾಜಿಯವರು ಕಾರ್ಯದರ್ಶಿಗಳಾದ ರಾಜೇಂದ್ರ ಉಪ ಕಾರ್ಯದರ್ಶಿಗಳಾದ ಪ್ರಭಾಕರ ನಾಯ್ಡು ಅವರು ಮುಂದೆ ನಿಂತು ಎಲ್ಲಾ ಕಾರ್ಯಕರ್ತರು ಪದಾಧಿಕಾರಿಗಳೊಂದಿಗೆ ಕಾರ್ಯಕ್ರಮ ನೆರವೇರಿಸಲಾಯಿತು . ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಸ್ವಾತಂತ್ರ್ಯದ ಸ್ವಾತಂತ್ರ್ಯದ ಬಗ್ಗೆ ಹಾಗೂ ಸ್ವಾತಂತ್ರ್ಯ ಹೋರಾಟದ ಕುರಿತಾದ ಅಂಶಗಳನ್ನು ಹೇಳಿದರು. ಪದಾಧಿಕಾರಿಗಳು ಕಾರ್ಯಕರ್ತರ ಸಮ್ಮುಖದಲ್ಲಿ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಸ್ವಲ್ಪ ಧನ ಸಹಾಯವನ್ನು ಸಹ ನೀಡಲಾಯಿತು.







